top of page

ಬ್ಯಾಸ್ಕೆಟ್‌ಬಾಲ್ ಮಕ್ಕಳ ಬೆಳವಣಿಗೆಯ ಏಣಿಯಾಗುವುದು ಹೇಗೆ

Writer's picture: Rahul DagliyaRahul Dagliya

Updated: Nov 8, 2023

"ಮಕ್ಕಳ ಉಕ್ಕಿನ ದೇಹದ ತೊಟ್ಟಿಲು - ಬ್ಯಾಸ್ಕೆಟ್ಬಾಲ್"

 

ಮಹೇಂದ್ರ ವಿ. ನ್.

Mahendra V.N

(M.PEd, Lecturer at Narayana Institutions

& Basketball Coach)

 

ಕ್ರೀಡೆಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆಹಾರಕ್ಕಾಗಿ ಪ್ರಾಣಿಗಳ ಬೇಟೆಯಿಂದ ಶುರುವಾಗಿ ನಂತರ ಮನರಂಜನೆಗಾಗಿ ಆಡುತ್ತಿದ್ದ ಕ್ರೀಡೆಗಳು ತದನಂತರ ಮಾನವ ವಿಕಾಸಗೊಳ್ಳುತ್ತಾ ಪ್ರತಿಸ್ಪರ್ದಿಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಮರಕಲೆಗಳಾಗಿ ಮಾರ್ಪಡದವು. ಇತ್ತೀಚಗಂತು ಕ್ರೀಡೆಗಳು ಪ್ರತಿಯೊಬ್ಬರ ಬದುಕಿನ ಭಾಗವಾಗಿರುವುದಲ್ಲದೆ ಆರೋಗ್ಯದ ಹಿತದೃಷ್ಟಿಯಿಂದ ಕ್ರೀಡೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಈ ಒಂದು ದ್ರಿಷ್ಟಿಕೋನದಿಂದಲೆ ಸ್ವಾಮಿ ವಿವೇಕಾನಂದರು "ಆಸ್ಪತ್ರೆಗಳ ಬದಲು ಫುಟ್ಬಾಲ್ ಕ್ರೀಡಾಂಗಣಗಳು ಕಟ್ಟಿ ಎಂದಿರಬಹುದು."


ಇತ್ತೀಚಿನ ಆದುನಿಕ ಯುಗದಲ್ಲಂತು ಆದರಲ್ಲೂ ನಗರ ಪ್ರದೇಶಗಳಲ್ಲಿ ಸ್ಮಾರ್ಟಫೋನ್ , ಲ್ಯಾಪಟಾಪ್ ಇನ್ನಿತರ ಉಪಕರಣಗಳು ಬಂದು ಮೇಲಂತೂ ಮಕ್ಕಳ ಮೇಲೆ ತುಂಬಾ ಕೆಟ್ಟ ಪರಿಣಾಮಗಳು ಬೀರುತ್ತಿದೆ. ಮಕ್ಕಳು ಕ್ರೀಡೆ, ಆಟೋಟಗಳಲ್ಲಿ ಭಾಗವಹಿಸುವ ಮಟ್ಟ ಕಡಿಮೆಯಾಗಿದೆ. ಆದ್ದರಿಂದ ಮಕ್ಕಳಲ್ಲಿ ಆರೋಗ್ಯ ಹಾಗೂ ಬೆಳವಣಿಗೆಯ ಮಟ್ಟ ಇಳಿಮುಖವಾಗುತ್ತಿದೆ. ಇವರ ಹಿತದೃಷ್ಟಿಯಿಂದ ಕ್ರೀಡೆಗಳು ಮತ್ತು ಆಟೋಟಗಳು ತುಂಬಾ ಪರಿಣಾಮಕಾರಿ ಆದರಲ್ಲೂ ಬ್ಯಾಸ್ಕೆಟ್ಬಾಲ್ ನಂತಹ ಕ್ರೀಡೆಯು ಅತ್ಯಂತ ಉಪಯುಕ್ತಕಾರಿಯಾಗಿದ್ದು, ಅವುಗಳ ಉಪಯೋಗಗಳನ್ನು ನೋಡುವುದಾದರೆ.



೧. ಈ ಕ್ರೀಡೆಯು ಅತ್ಯಂತ ವೇಗದ ಕ್ರೀಡೆಯಗಳಲ್ಲಿ ಎರಡನೇ ಸ್ಥಾನವನ್ನು ಹೊಂದಿದ್ದು ಇದು ಮಕ್ಕಳಲ್ಲಿ ವೇಗವಾಗಿ ಯೋಚಿಸುವ ಶಕ್ತಿಯನ್ನು ಹೆಚ್ಚಿಸುವ ಮೂಲಕ ಚುರುಕುತನವನ್ನು ವ್ರಿದ್ಧಿಸುತ್ತದೆ.


೨. ಕ್ರೀಡೆಯು ಮಕ್ಕಳಲ್ಲಿ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ ದೇಹದ ಚಲನಾಂಗಗಳ ವೇಗದ ಪತಬದಲಾವಣೆಗೆ(agility) ಸಹಾಯ ಮಾಡುತ್ತದೆ.


೩. ಈ ಕ್ರೀಡೆಯು ದೀರ್ಘಕಾಲದವರೆಗೆ ಆಡುವುದರಿಂದ ಮಕ್ಕಳಲ್ಲಿ ಕಷ್ಟಸಹಿಷ್ಣುತೆ(endurance) ವ್ರದ್ದಿಸುತದೆ.


೪. ಈ ಕ್ರೀಡೆಯಲ್ಲಿ ಹೆಚ್ಚಿನ ಜಿಗಿತದ ಸಂದರ್ಭಗಳಿದ್ದು (jumping movements) ,ಮಕ್ಕಳಲ್ಲಿ ಅಸ್ತಿರಜ್ಜು(ligament) ಮತ್ತು ಮೂಳೆಯ ಸಂದಿಗಳ (joints) ಸಾಮರ್ಥ್ಯವನ್ನು ಹೆಚ್ಚಿಸುತ್ತದೆ


೫. ಮಕ್ಕಳಲ್ಲಿ ಸರ್ವತೋಮುಖ ಅಭಿವೃದ್ಧಿ ಪಡಿಸುವ ಕ್ರೀಡೆಗಳ ಸಾಲಲ್ಲಿ ಬ್ಯಾಸ್ಕೆಟ್ಬಾಲ್ ಕ್ರೀಡೆಯು ಒಂದಾಗಿದೆ.



೬. ಈ ಕ್ರೀಡೆಯು ಮೋಟಾರ್ ಕೌಶಲ್ಯ (motor skills ) ಅಂದರೆ ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸಲು ದೇಹದ ಸ್ನಾಯುಗಳ ನಿರ್ದಿಷ್ಟ ಚಲನೆಗಳನ್ನು ಒಳಗೊಂಡಿರುವ ಒಂದು ಕಾರ್ಯವಾಗಿದ್ದು ಈ ಕೌಶಲ್ಯವನ್ನು ನಿರ್ವಹಿಸಲು ದೇಹದ ನರಮಂಡಲ, ಸ್ನಾಯುಗಳು ಮತ್ತು ಮೂಳೆಗಳು ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ .ಈ ರೀತಿ ಮಕ್ಕಳಲ್ಲಿ ಮೋಟಾರ್ ಕೌಶಲ್ಯಗಳ ಅಭಿವೃದ್ಧಿಯಲ್ಲಿ ಬ್ಯಾಸ್ಕೆಟ್ಬಾಲ್ ಕ್ರೀಡೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಫುಟ್ಬಾಲ್ ಕ್ರೀಡೆಯು ಸಹ ಇದೇ ರೀತಿಯ ಅಂಶಗಳನ್ನು ಒಳಗೊಂಡಿದೆ.




207 views0 comment

Комментарии


bottom of page